Krishna to Kaveri | ಕೃಷ್ಣೆಯಿಂದ ಕಾವೇರಿವರೆಗೆ
About
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch.
*Krishna to Kaveri* is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances!
Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey.
Let the rivers lead. Let culture move. Let Karnataka unfold.
ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ.
ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ *‘ಕೃಷ್ಣೆಯಿಂದ ಕಾವೇರಿವರೆಗೆ ʼ*. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು.
ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ.
ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ!
Across the Weekend | Nov 7&8
Made in Karnataka | ಕರ್ನಾಟಕದ ತಯಾರಿಕೆಗಳು
A Showcase of Crafts, Makers and Traditions | ಕಲೆ, ಕಲಾವಿದರು ಮತ್ತು ಪರಂಪರೆಗಳ ಪ್ರದರ್ಶನ
by Crafts Council of Karnataka | ಕರಕುಶಲ ಪರಿಷತ್ತು, ಕರ್ನಾಟಕ
Ground floor foyer
Ancient Games, Timeless Connections | ಪ್ರಾಚೀನ ಆಟಗಳು, ಕಾಲಾತೀತ ಬೆಸುಗೆಗಳು
A Foray into Games, Stories and Laughter |ಆಟ, ಕಥೆ ಮತ್ತು ನಗುವಿನ ಲೋಕದೆಡೆಗೆ ಒಂದು ಪಯಣ
by Kavade | ಕವಡೆ
First floor foyer
Madanika and Makara Torana | ಮದನಿಕಾ ಮತ್ತು ಮಕರ ತೋರಣ
A Fine-Art Exhibition of Handmade Silver Gelatin Photographs | ಹಸ್ತನಿರ್ಮಿತ ಸಿಲ್ವರ್ ಜೆಲಾಟಿನ್ ಛಾಯಾಚಿತ್ರಗಳ ಲಲಿತಕಲಾ ಪ್ರದರ್ಶನ
by Karthik K. Samprathi | ಕಾರ್ತಿಕ್ ಕೆ. ಸಂಪ್ರತಿ
second floor foyer
Karnataka Weaves | ಕರ್ನಾಟಕದ ನೇಯ್ಗೆ
Threads That Hold a Heritage | ಪರಂಪರೆಯನ್ನು ಎತ್ತಿಹಿಡಿಯುವ ದಾರದೆಳೆಗಳು
by Vimor Handloom Foundation | ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್
Gallery
The Festival Trail | ಹಬ್ಬದ ಸಂಭ್ರಮದ ಪಯಣ
A Treasure Hunt through the Building | ರಹಸ್ಯ ನಿಧಿಯ ಹುಡುಕಾಟದ ಆಟ
ACROSS THE BUILDING